About Editor

"ಒಂದು ಪುಸ್ತಕ, ಒಂದು ಪೆನ್, ಒಂದು ಮಗು ಮತ್ತು ಒಬ್ಬ ಮಾನವನ ವಿಶ್ವಾಸವನ್ನೇ ಬದಲಿಸಬಹುದು.
ಹರಿಯುವ ನದಿಯಲ್ಲಿ ಒಮ್ಮೆ ಮುಟ್ಟಿದ ನೀರು ಮತ್ತೆ ಸಿಗೋಲ್ಲ,
ಕಳೆದು ಹೋದ ಸಮಯ ಮತ್ತೆ ದೊರಕುವುದಿಲ್ಲ? ಸಿಕ್ಕ ಅವಕಾಶವನ್ನು ಅಮೂಲ್ಯವಾಗಿಸುವುದೇ "ಅಮೂಲ್ಯ ವಾಣಿ "
ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ ನಾವಂದುಕೊAಡಿದ್ದನ್ನು ಸಾಧಿಸಲು ಮೊಟ್ಟಮೊದಲನೆಯದಾಗಿ ಬೇಕಿರುವುದು ಪತ್ರಿಕೋದ್ಯಮ.
ಮೊಟ್ಟ ಮೊದಲು ಪತ್ರಿಕೆ ಭಾರತದಲ್ಲಿ ಶುರುವಾದದ್ದು 1780ರಲ್ಲಿ, ಗಜಟ್ಟಿ ಎಂಬ ಪತ್ರಿಕೆ. ಇಕ್ಕಿಸ್ ಬೆಂಗಾಲ್ ಗಜಟ್ಟಿ ಪ್ರಾರಂಭವಾಯಿತು, ಶ್ರೀ ಜೇಮ್ಸ್ ಅಗಸ್ಟಾಸ್ ಇಕ್ಕಿಸ್ ಪತ್ರಿಕೆ ಪ್ರಾರಂಭಿಸಿದರು. 1780ರಲ್ಲಿ ನಮ್ಮ ಭಾರತದಲ್ಲಿ ಶುರುವಾಯಿತು ಪತ್ರಿಕೋದ್ಯಮ. 1985ರಲ್ಲಿ ಕ್ರಿಸ್ತಶಕ ಎಂಬ ಹೆಸರಿನ ಪತ್ರಿಕೆಯನ್ನು ಡಾ. ನಿಕಲಾಸ್ ರೆಡ್ಡಿ ಸಂಪಾದಕತ್ವದಲ್ಲಿ ಪ್ರಾರಂಭಿಸಲಾಯಿತು.
ನಿಕಲಾಸ್ ರೆಡ್ಡಿ ರವರ ಕಿರಿಯ ಪುತ್ರ ಶ್ರೀ ಜೇಮ್ಸ್ ರವರು, ಚಿಕ್ಕ ವಯಸ್ಸಿನಲ್ಲಿ (7ನೇ ತರಗತಿ) ಇದ್ದಾಗ ಪತ್ರಿಕೋದ್ಯಮ ನೋಡಿದ್ದಷ್ಟೆ.
1998 ರಲ್ಲಿ ಡಾ. ನಿಕೋಲಾಸ್ ರೆಡ್ಡಿ ರವರು.
ಒಬ್ಬ ಹಿರಿಯ ಪತ್ರಕರ್ತ ಶ್ರೀ ಜಿ ವಿ ರಾಮರಾವ್ ರವರು ಪೊಲೀಸ್ ವಾಣಿ ಮತ್ತು ಹೊಯ್ಸಳ ಎಂಬ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಮತ್ತು ಹಿರಿಯ ಪತ್ರಕರ್ತ ಶ್ರೀ ಸತ್ಯನಾರಾಯಣರವರ `ಗರುಡನ ಕಣ್ಣು’ ಎಂಬ ಮಾಸಪತ್ರಿಕೆಯನ್ನು ನಡೆಸುತ್ತಿದ್ದರು.
2008ರಲ್ಲಿ ಶ್ರೀ ಜಿ ವಿ ರಾಮರಾವ್ ಮತ್ತು ಶ್ರೀ ಸತ್ಯನಾರಾಯಣ ರವರ ಪತ್ರಿಕಾ ಸಂಪರ್ಕ ಪರಿಚಯಗೊಂಡಿದ್ದೆ ಇಲ್ಲಿಂದ....
ಶ್ರೀ ಜಿ ವಿ ರಾಮರಾವ್‌ರವರು ಜಿನೀ ನ್ಯೂಸ್ ಪತ್ರಿಕೆಯ ಸಹ-ಸಂಪಾದಕನಾಗಿ ಮತ್ತು `ಗರುಡನ ಕಣ್ಣು’ ಪತ್ರಿಕೆಯಲ್ಲಿ ಮುಖ್ಯ ಸಂಪಾದಕನಾಗಿ ಸೇರಿ, 2012 ರಲ್ಲಿ ನನ್ನ ಪತ್ರಿಕೋದ್ಯಮ ಮುನ್ನಡೆಸುತ್ತ, 2018 ರಲ್ಲಿ `ಕ್ಯಾಪಿಟಲ್ ಕೇರ್’್ಸ ಆಂಗ್ಲ ಮಾಸಪತ್ರಿಕೆಯ ಸಂಪಾದಕನಾಗಿ, ಪತ್ರಿಕೆಗಳನ್ನು ನಡೆಸುತ್ತಾ ಬಂದದ್ದು ಅವರ ಪತ್ರಿಕೋದ್ಯಮದ ಛಾಪನ್ನು ಬದಲಾಯಿಸಿತು.
ಈಚೆಗೆ 2022ರಲ್ಲಿ ಅಮೂಲ್ಯ ವಾಣಿ ಎಂಬ ರಾಜ್ಯಮಟ್ಟದ ದ್ವಿಭಾಷಾ ದಿನಪತ್ರಿಕೆಯನ್ನು ಪ್ರಾರಂಭಿಸಿದ್ದು, ಪತ್ರಿಕೆಯ ಮುಖ್ಯ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ...